ಹೋಗಿ ಬಿಡು ನೀನು ಬರುವ ಮೊದಲೇ...
- VinuVeda
- Sep 5, 2021
- 1 min read
Updated: Dec 19, 2021

ನೋವುಂಡಿದ್ದೇನೆ ಹಲವು
ಹೋಗಿ ಬಿಡು ನೀನು
ನಿನ್ನಿಂದ ನೊವುಣ್ಣುವ ಮೊದಲೆ
ಕಷ್ಟವೆನಿಸಿದೆ ಬದುಕು
ಹೋಗಿಬಿಡು ನೀನು
ನಿನ್ನಿಂದ ಕಷ್ಟವೆನಿಸುವ ಮೊದಲೆ
ಅವಮಾನವುಂಡಿದ್ದೇನೆ ನಾನು
ಹೋಗಿ ಬಿಡು ನೀನು
ನೀನವಮಾನಿಸಿದೆಂದರಿವಾಗುವ ಮೊದಲೆ
ಬಿರುಗಾಳಿಗೆ ತತ್ತರಿಸಿದೆ ಮನ
ಹೋಗಿಬಿಡು ನೀನು
ನೀನೆ ಬಿರುಗಾಳಿಯಾಗುವ ಮೊದಲೆ
ಹಾಸ್ಯಸ್ಪದವಾಗಿದ್ದೇನೆ ನಾನು
ಹೋಗಿಬಿಡು ನೀನು ನಿನ್ನ ಕಣ್ಣಲ್ಲಿ ನಾನು ಹಾಸ್ಯವಾಗುವ ಮೊದಲೆ
ನಕ್ಕಿದ್ದೇನೆ ನೀನು ಬಂದ ಮೇಲೆ
ಹೋಗಿಬಿಡು ನೀನು
ನನ್ನ ನಗುವಳಿಸುವ ಮೊದಲೆ
ಹೋಗಿಬಿಡು ನೀನು
ನಿನ್ನಿಂದಲೇ ಸಿಕ್ಕ ಸಂತೋಷದ ಕ್ಷಣಗಳ
ನೆನಪುಗಳು ಮಾಯುವ ಮೊದಲೆ
ಹೋಗಿಬಿಡು ನೀನು
ದ್ವೇಷ ಹುಟ್ಟುವ ಮೊದಲೆ
ಹೋಗಿಬಿಡು ಬಹಳಷ್ಟು ದೂರ
ನಾನೆಷ್ಟೆ ತಡಕಾಡಿದರೂ ಸಿಗದಂತೆ
ಭೋರ್ಗರೆದು ಅತ್ತರೂ ಕೇಳದಂತೆ
.
.
.
ಹೋಗಿಬಿಡು ನೀನು ಬರುವ ಮೊದಲೇ...
PC : from Twitter account @restot50
✍🏻ವಿನುವೇದ
Comentarios