

ಹೆಸರು ಬೇಕೆ?
ಹೊನ್ನ ಛತ್ರಿ ಬೇಡ, ಬೆಳ್ಳಿ ರಥ ಬೇಡ ಬಿದರ ಕೋಲು ಸಾಕು ಆಧಾರಕ್ಕೆ ಸಾಕು ತುಂಡು ಕಟ್ಟಿಗೆ ದಹನಕ್ಕೆ! ಯಾರ ಹಂಗಿಲ್ಲದೆ ದೇಹ ಬಿಟ್ಟೋಡುವ ಆತ್ಮಕ್ಕೆ ಅನಂತದೆಡೆಗೆ...


ಕೃಷ್ಣ ಅಸಲು ನೀ ಬರೀ ರಾಧೆಗೇಕೆ ಮೀಸಲು?
ಜಗವ ಪೊರೆವವ ನೀನು ತುಸು ಗಂಭೀರ ಇರಬಾರದೆ! ಗೋಪಿಯರ ಮನಸು ಜಾರದಂತೆ? ನಿನ್ನೊಲವಲ್ಲಿ ಬೀಳದಿರುವಂತೆ? ನಿನಗಾಗಿ ಹಪಹಪಿಸದಂತೆ? ನೀನೇಕೆ ವರ್ತಿಸಬಾರದು ರಾವಣನಂತೆ?...