
ಕೃಷ್ಣ ಅಸಲು ನೀ ಬರೀ ರಾಧೆಗೇಕೆ ಮೀಸಲು?
- VinuVeda
- 4 days ago
- 1 min read
ಜಗವ ಪೊರೆವವ ನೀನು ತುಸು ಗಂಭೀರ ಇರಬಾರದೆ!
ಗೋಪಿಯರ ಮನಸು ಜಾರದಂತೆ?
ನಿನ್ನೊಲವಲ್ಲಿ ಬೀಳದಿರುವಂತೆ?
ನಿನಗಾಗಿ ಹಪಹಪಿಸದಂತೆ?
ನೀನೇಕೆ ವರ್ತಿಸಬಾರದು ರಾವಣನಂತೆ?
ಕೆಟ್ಟಕೆಲಸ ಮಾಡಿಯೂ ಒಳ್ಳೆಯವನೆನಿಸಿಕೊಳ್ಳೋ ಈಗಿನ ಹೀರೋಗಳಂತೆ!!
ಮೆಚ್ಚಬೇಕೇಕೆ ನಿನ್ನ ?
ಯಾರಿಗೂ ಮೀಸಲಿಲ್ಲದ ನೀನು
ನಿನ್ನಿಂದ ನೀರೀಕ್ಷೆಯಾದರೂ ಏನು?
ಬೈಯಲೇ ಹೊಡೆಯಲೇ ಶಿಕ್ಷಿಸಲೇ
ಸುಧಾರಿಸುವುದ್ಯಾವಾಗ ನೀನು
ಜಗದೋದ್ಧಾರಕನಲ್ಲವೇ
ಜವಾಬ್ದಾರಿ ಬೇಡವೆ ??
✍🏻ವಿನುವೇದ
Comments