
ಜಾತ್ಯಾತೀತತೆ
- VinuVeda
- Nov 17, 2021
- 1 min read
Updated: Dec 21, 2021
ಬರುಬರುತ್ತ ರಾಯರ ಕುದುರೆ ಕತ್ತೆಯಾದಂತೆ ಇತ್ತೀಚೆಗೆ ಕೆಲವು ಪದಗಳ ಅರ್ಥವೆ ಬದಲಾದವೇನೋ ಎಂಬಷ್ಟು ಆಶ್ಚರ್ಯವಾಗುತ್ತದೆ. ಮುಖ್ಯವಾಗಿ ಬುಧ್ದಿಯ ವಿಚಾರ. ವಿದ್ಯಾವಂತರಾದ ಬುದ್ಧಿವಂತ ದಡ್ಡರ ಸಮಸ್ಯೆ ದಿನೇ ದಿನೇ ಪ್ರಜಾಪೀಡೆಯಾಗಿ ಬದಲಾಗುತ್ತಿದೆ.
ಇದರಲ್ಲಿ ಅತಿಶಯವೆನಿಸುವುದು ನಮ್ಮ ಜಾತ್ಯಾತೀತರೆಂಬವರದು! ಇವರ ಪ್ರಕಾರ ಹಿಂದೂ ಧರ್ಮವನ್ನು ಹೀಗಳೆಯುವುದು ಜಾತ್ಯಾತೀತತೆ ಮತ್ತು ಎಲ್ಲರನ್ನು ಸಮನಾಗಿ ನೋಡುವುದೆಂದರೆ ಹಿಂದೂ ಧರ್ಮವನ್ನು ಖಂಡಿಸುವುದು. ಉಂಡಮನೆಗೆ ಎರಡು ಬಗೆಯುವ ದುಷ್ಟರು ಎಲ್ಲಾ ಕಡೆಯೂ ಹಾಜರಿರುವಂತೆ ಎಲ್ಲ ಶಾಲಾ ಕಾಲೇಜುಗಳಲ್ಲು ಇಂತಹ ಯೋಚನೆಗೆ ಕುಮ್ಮಕ್ಕು ಕೊಡುವಂತ ಪಾಠಗಳು ಕೂಡ!!
ಎಲ್ಲಿಯವರೆಗೆ ಈ ಮೌಢ್ಯ ಆವರಿಸಿದೆ ಎಂದರೆ
ಕೇಕ್ ಮುಖಕ್ಕೆ ಮೆತ್ತಿದರೆ ತಪ್ಪಿಲ್ಲ ವಿಷ್ಣುವಿಗೆ ನೈವೆದ್ಯಕ್ಕ್ಕಿಟ್ಟರೆ ನಷ್ಟ! ಚಟಕ್ಕೆ ಕುಡಿದರೆ ತಪ್ಪಿಲ್ಲ ಶಿವನಿಗೆ ನಾಗನಿಗೆ ಹಾಲೆರೆದರೆ ನಷ್ಟ! ಪ್ರಾಣಿ ಪಕ್ಷಿ ಕೊಂದು ತಿಂದರೆ ತಪ್ಪಿಲ್ಲ ದೀಪಾವಳಿಗೆ ಪಟಾಕಿ ಹಚ್ಚಿದರೆ ಪ್ರಾಣಿಹಿಂಸೆ!!
ಫೈವ್ ಸ್ಟಾರ್ ಹೋಟೇಲಲ್ಲಿ ಸಾವಿರ ಕೊಟ್ಟು ಸಾರವಿಲ್ಲದ್ದು ತಿಂದರೆ ತಪ್ಪಿಲ್ಲ ದೇವಾಸ್ಥಾನದ ಊಟದಲ್ಲಿ ಪೌಷ್ಟಿಕಾಂಶ ಬೇಕು! ಪ್ರಸಿದ್ಧ ನಟರ ಮಕ್ಕಳು ಅಮಲು ಪದಾರ್ಥ ಸೇವಿಸಿ ಜೈಲಿಗೆ ಹೋಗಿ ಬಂದರೆ ಸ್ವಾಗತ ಆದರೆ ದೇಶವಾಳುವ ಪ್ರಧಾನಿಗೆ ಛೀಮಾರಿ! ಅಮಲು ಪಾದಾರ್ಥ ತಿನ್ನುವವರ ಹಿಂದೆ ದೇಶ ನಿಲ್ಲುತ್ತದೆ ಎಂದು ಪತ್ರ ಮುಖೇನ ಬೆಂಬಲ ಸೂಚಿಸಲು ರಾಹುಲ್ ಗಾಂಧಿ ನಿಲ್ಲುತ್ತಾರೆ!!! ಮುಸಲ್ಮಾನರು ತಿನ್ನಲು ಹಲಾಲ್ಕಟ್ ಮಾಂಸವೇ ಬೇಕು ಹಿಂದೂಗಳು ದೇವರಿಗರ್ಪಿಸುವ ಹಣ್ಣುಗಳ ಮೇಲೆ ಎಂಜಲು ಹಚ್ಚಬಹುದು!
ಒನಕೆ ಓಬವ್ವ ಕೊಡಗಿನಲ್ಲಿ ಮೂವತ್ತೊಂದು ಬಾರಿ ಟಿಪ್ಪುವನ್ನು ಸೋಲಿಸಿದ ಕುಲ್ಲೇಟಿಪೊನ್ನಣ್ಣರ ದಿನಾಚರಣೆ ಆಚರಿಸಲು ಮುಖಭಂಗವಾದಂತೆ ವರ್ತಿಸುವವರು ಶಿವಾಜಿಯನ್ನು ಆರಾಧಿಸಲು ಹಿಂಜರಿಯುವವರು ಟಿಪ್ಪು ದಿನಾಚರಣೆ ಮಾಡಲು ಉತ್ಸುಕರಾಗಿರುವುದು ಎಂಥಾ ಹಾಸ್ಯಾಸ್ಪದ!

ಹಿಂದೂ ಹೆಣ್ಮಗಳು ಮುಸಲ್ಮಾನರ ಮನೆ ಸೇರಬಹುದು ಅದೆ ಮುಸಲ್ಮಾನರ ಹೆಣ್ಮಗಳು ಹಿಂದು ಯುವಕರೊಂದಿಗೆ ಕಾಣಿಸಿಕೊಂಡರೆ ಕೊಲೆ!
ಬೆಳಗಿನ ಜಾವ ಸುಬ್ಬುಲಕ್ಷ್ಮಿಯವರ ಸುಪ್ರಭಾತ ಕಿರಿಕಿರಿ ಆದರೆ ಕರ್ಕಶ ಧ್ವನಿಯಲ್ಲಿ ಧ್ವನಿವರ್ದಕದಲ್ಲಿ ಆಜಾನ್ ಮಾಡಿದರೆ ತೊಂದರೆಯಿಲ್ಲ.
ಓಟಿಗಾಗಿ "ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗುವೆ" ಎನ್ನುವ ಹಿರಿಯ ರಾಜಕೀಯ ಮತ್ಸದ್ದಿಯಾದವರೆಲ್ಲ ಮುಸಲ್ಮಾನ ಧರ್ಮಕ್ಕೆ ಬದಲಾಗಲಿಲ್ಲವೇಕೆ?
ಬರಿಯ ಬಾಯಿಬಡುಕತನ ಹಾಗು ದುಡುಕು ಸ್ವಭಾವದ ಒಬ್ಬನಿದ್ದರೆ ಕನಿಷ್ಠ ನೂರರಲ್ಲಿ ನಲವತ್ತು ಜನರನ್ನ ಯಶಸ್ವಿಯಾಗಿ ತನ್ನ ಮಾತಿನ ಭರದಲ್ಲಿ ಬದಲಾಯಿಸಬಲ್ಲ ಕಲೆಗಾರರಿಗೇನು ಕಮ್ಮಿ ಇಲ್ಲ. ಇನ್ನುಳಿದ ಅರವತ್ತು ಜನರಲ್ಲಿ ಕನಿಷ್ಠ ಮೂವತ್ತು ಜನರನ್ನು ಗೊಂದಲಕ್ಕೀಡು ಮಾಡುವರು ಉಳಿದ ಮೂವತ್ತರಲ್ಲಿ ಇಪ್ಪತ್ತು ಜನಕ್ಕೆ ಸತ್ಯ ತಿಳಿಹೇಳುವ ವ್ಯವಧಾನವಿಲ್ಲ ಇನ್ಹತ್ತು ಜನಕ್ಕೆ ಸಾಕಷ್ಟು ಬೆಂಬಲವಿಲ್ಲ.
ಭಾರತದ ದೇಶವಾಸಿಗಳಾಗಿಯೂ ಕೂಡ ಬೆಂಬಲ ಪಾಕಿಸ್ತಾನಕ್ಕೆ ಎನ್ನುವ ಮೂರ್ಖರಿದ್ದಾರೆ ನಮ್ಮಲ್ಲಿ ಹೆತ್ತ ತಾಯನ್ನು ಗೌರವಿಸಲು ತಿಳಿದಿದ್ದರೆ ತಾನೆ ದೇಶ ಗೌರವಿಸಲು ಸಾಧ್ಯ!!?
ಇದೆಲ್ಲದರ ನಡುವೆ ಎಲ್ಲವೂ ತಿಳಿದ ಜನರು ನಕ್ಕು ಸುಮ್ಮನಾಗುವರು.
>>>>>><<<<<<<<<<>>>>>>>>>><<<<<https://www.vinuveda.com/single-post/%E0%B2%9C-%E0%B2%A4-%E0%B2%AF-%E0%B2%A4-%E0%B2%A4%E0%B2%A4-%E0% https://www.vinuveda.com/single-post/%E0%B2%9C-%E0%B2%A4-%E0%B2%AF-%E0%B2%A4-%E0%B2%A4%E0%B2%A4-%E0% https://www.vinuveda.com/single-post/%E0%B2%9C-%E0%B2%A8-%E0%B2%AC-%E0%B2%AF-%E0%B2%AC%E0%B2%A1-%E0%
ಅವರಿಗೆ ಜನ್ಮದಲ್ಲಿ ಬುದ್ಧಿ ಬರೋದಿಲ್ಲ ಮೇಡಂ