
ವಿರಹ
- VinuVeda
- Sep 7, 2017
- 1 min read
Updated: Dec 19, 2021
ಸಜೆ
ಮರೆಯಲಾರೆ ನಿನ್ನ ನಿಜ ಕೊಟ್ಟರೂ ನಿನ್ನ ನೆನಪಿಗೆ ನಾನು ರಜ ನೀ ನನ್ನ ಬದುಕಲ್ಲಿ ಬಂದಿದ್ದೇ ನನಗೊಂದು ಸಜಾ ಇರು ನೀನು ನನ್ನಿಂದ ದೂರಕ್ಕೆ ಹತ್ತು ಗಜ
ಲೋಕ
ಮಿಥ್ಯದಾ ಲೋಕವಿದು ಸತ್ಯವಿಲ್ಲಿಲ್ಲ ಕನಸಗೂಡೆಂಬುದದು ಸತ್ಯಕ್ಕೆ ಬಹುದೂರ ರೆಪ್ಪೆ ತೆರೆದರೆ ಕಾಣುವುದು ನಿಜದ ಬರ್ಬರ ಮುಚ್ಚಿದರೆ ರೆಪ್ಪೆ ಸ್ವರ್ಗ, ತರೆದರಲ್ಲೆ ನರಕ
ಅವರಿವರೆಂಬಂತೆ ಬದುಕೊಂದು ನಾಟಕಶಾಲೆ
ಸೃಷ್ಟಿ ಕತ್ತಲಲಿ ಕಣ್ಬಿಡುವ ಗೂಗೆ ಸತ್ತವರ ಪಿಂಡ ಭಕ್ಷಿಸುವ ಕಾಗೆ ಸ್ವರ್ಗದ ಕಲ್ಪನೆಯಲಿ ಇಹವ ಮರೆತಿರುವ ಹುಲುಮಾನವ ಎಲ್ಲ ಆ ಮಾಯೆಯ ಸೃಷ್ಟಿ
ಹಾರೈಕೆ
ಕಟ್ಟಿಕೊ ಗೆಳೆಯ ನಿನ್ನ ಕನಸುಗಳ ಹೊಸ ಸಾಲುಗಳನು ಕಟ್ಟಿಕೋ ನಿನ್ನಾಸೆಯ ಬದುಕನ್ನು ಆರದಿರಲಿ ನಿನ್ನಾಸೆಯ ಕಂದಿಗೆ ತಾಕದಿರಲಿ ನಿನ್ನಾಸೆಗಳು ಕೆಟ್ಟ ಕಣ್ಣಿನ ಕೂರಂಬಿಗೆೆ

✍🏻ವಿನುವೇದ
Comments