ಹೆಸರು ಬೇಕೆ?
- VinuVeda
- 9 hours ago
- 1 min read
ಹೊನ್ನ ಛತ್ರಿ ಬೇಡ, ಬೆಳ್ಳಿ ರಥ ಬೇಡ
ಬಿದರ ಕೋಲು ಸಾಕು ಆಧಾರಕ್ಕೆ
ಸಾಕು ತುಂಡು ಕಟ್ಟಿಗೆ ದಹನಕ್ಕೆ!
ಯಾರ ಹಂಗಿಲ್ಲದೆ ದೇಹ ಬಿಟ್ಟೋಡುವ ಆತ್ಮಕ್ಕೆ
ಅನಂತದೆಡೆಗೆ ದಾಪುಗಾಲಿಡುವ
ಪ್ರತಿ ಹೆಜ್ಜೆಗೂ ವಯಸ್ಸೆಂಬ ಹೆಸರೇನು?
ಪಾಪ ಪುಣ್ಯಗಳ ಲೆಕ್ಕಾಚಾರಕ್ಕೆ
ತಪ್ಪು ಸರಿಗಳ ಗೊಂದಲಕ್ಕೆ
ಹೆತ್ತವರ ಹೆದರಿಕೆ ನೆರೆ 'ಹೊರೆಗೆ'
ಸಂ' ಬಂಧಿಗಳ ಬಂಧ'ನಕ್ಕೆ ಜವಾಬ್ದಾರಿಗಳ ಭಾರಕ್ಕೆ ಕುಗ್ಗಿದ ಹೆಗಲಿಗೆ ಜೀವನವೆಂಬ ಹೆಸರೆ?
ಒಂದೆರಡು ಸಲ ಅರಳುವ
ನಗುವಿಗಾಗಿ ನಿರಂತರ ತೊಟ್ಟಿಕ್ಕುವ ಕಣ್ಣೀರಿಗೆ
ಸಾವ ಹಿಂಬಾಲಿಸುವ ಹುಟ್ಟಿಗೆ!
ಕುರುಡು ಕಾಂಚಾಣದಾಸೆಗೆ
ನಡೆವ ಮೋಸದಾಟಕ್ಕೆ
ಸಂತೋಷವೆಂಬ ಹೆಸರೆ ?
ಕಟು ಮಾತಿಗೆ ಘಾಸಿಗೊಂಡ ನೊಂದ ಮನಸಿಗೆ ಅನುಭವವೆಂಬ ಹೆಸರೆ?
ಎಲ್ಲವ ಬರೆದು ನಿರ್ದೇಶಿಸಿ ಪ್ರಕೃತಿ ಮಡಿಲಲ್ಲಿ ಯಶಸ್ವಿ ಪ್ರದರ್ಶನ ತೋರುವ ಕ್ರೂರ
ಕಾಣದ ಕೈಗಳಿಗೆ ದೇವರೆಂಬ ಹೆಸರೆ!!?