ಮಳೆ ಮತ್ತು ಅವನು
- VinuVeda
- Oct 7, 2017
- 1 min read
Updated: Dec 19, 2021
ಓ ಹುಡುಗ...
ಮಳೆಯಲಿ ನಿನ್ನೆದೆಗೆ ಒರಗುವಾಸೆ
ನನ್ನೆಲ್ಲ ನೋವುಗಳ ಹೇಳುವಾಸೆ
ನಿನ್ನೆದೆ ಬಡಿತದ ಹಿತ ಅನುಭವಿಸುವಾಸೆ
ಹಸಿರು ಕಾನನದ ನಡುವೆ ಮೋಹದ ಮರಿಜಿಂಕೆ ಹುಡುಕುವಾಸೆ
ಕನಸೆಂಬ ಚೇರಟೆ ಸುತ್ತುವಾಸೆ
ಸುಖವೆಂಬ ಕಪ್ಪೆ ಹಿಡಿಯುವಾಸೆ
ಮಣ್ಣವಾಸನೆಗೆ,
ನಿನ್ನುಸಿರ ತಾಳಕೆ
ಕಳೆದ್ಹೋಗೊ ಆಸೆ
ಚಿಗುರು ಟಿಸಿಲೊಡೆದ,ಹೂವರಳಿದ
ಸದ್ದಿಗೆ ಬೆಚ್ಚಿಬೀಳುವಾಸೆ
ಒಂದೇ ಕೊಡೆಯಲಿ ಇಬ್ಬರು ನೆನೆವಾಸೆ
ಮರೆಯದಿರು ತಬ್ಬಲೂ
✍🏻ವಿನುವೇದ
Comentários