
ನವಿಲುಗರಿ
- VinuVeda
- Sep 11, 2017
- 1 min read
Updated: Dec 19, 2021
ಕನ್ನಡ
ಧನ್ಯವಾದಗಳು ಶೋತೃವೆ ನಿನಗಿದೋ ವಂದನೆ
ಕನ್ನಡವದು ಕಬ್ಬಿಣದ ಕಡಲೆಯಲ್ಲ ಕಾಗಿನೆಲೆಯಾದಿ
ಕೇಶವರಾಯನ ಕಾಲದಿಂ ಮನುಕುಲವ ಉಧ್ದರಿಸಿದ
ಭಾಷೆಯದು ಅಪ್ಪುಮುದ್ದಾಡು ಮುದದಿಂದೀಭಾಷೆಯ
ಆಸ್ಥಾನ ನರ್ತಕಿ
ಯಾರೂ ಕಾಣರಂದು ಕಾಡಿನ ನಡುವೆ
ಅವಳಿಗೆ ಮುತ್ತಿಟ್ಟೆ ಸಾವಿರ ಕಂಗಳವು
ನಮ್ಮನೀಕ್ಷಿಸುತಿದ್ದುದ ನೋಡಿ ಹಿಂಬಾಲಿಸಿದೆ
ಕೆಲ ಕಣ್ಣುಗಳು ನನಗೂ ದಕ್ಕಿದವು
ಹೊಸ ದೃಷ್ಟಿಕೋನದಂತೆ
ದಟ್ಟ ಕಾನನದ ನಡುವೆ
ಛಟ್ಟೆಂದು ನೊಡಿದರೆ ಕಣ್ಣಿಗೆ ಬೀಳದ
ನವಿಲ ಕಂಗಳ ರಾಶಿ
ವನದೇವತೆಯ ಆಸ್ಥಾನ ನರ್ತಕಿ ಕಳಚಿಟ್ಟ
ಉಡುಪು ಕದ್ದು ತಂದಿರುವೆನಾನು
ಪ್ರೇಮ
ನಿನ್ನ ಕಣ್ಣಲ್ಲಿತ್ತು ನನ್ನ ಬಿಂಬ
ಗೆಳೆಯಾ ನನಗರಿವಿಲ್ಲದೇ
ನೀ ತುಂಬಿದ್ದೆ ನನ್ನ ಹ್ರದಯಾ
ಆಗಿಹೋಯಿತು ನಮ್ಮಲ್ಲಿ ಪ್ರೇಮದ ಪ್ರಳಯ
ಸಾವಿಗೆ ಶೃಂಗಾರ
ಪ್ರೀತಿಗೆಲ್ಲಿ ಜಾಗ
ಅದರಲ್ಲಿರುವುದು ಬರೀ ತ್ಯಾಗ
ಕೊನೆಯುಸಿರು ನಿನ್ನ ತೋಳಲ್ಲಾದರೆ
ಸಾವಿಗೆ ನಿಜಕ್ಕೂ ಶೃಂಗಾರದ ಸಂಭ್ರಮ
ಬಾಳು
ಜರೆದ ಮಾನವರ ಜರಡಿ ಮಾಡಿ
ಭಂಡನೆಂದವರ ಬರಿದಂಡವೆಂದು
ನಡೆ ಮುಂದೆ ನಡೆ ಮುಂದೆ ನೀ ಹಿಂದೆನೋಡದೆ
ಕರೆಯದೇ ಬಂದವರು ಕರಗಿ ಹೋಗುವರು
ಉರಿದು ಹೋಗದಿರು ಓ ಮರುಳ
ಬಂದ ದಾರಿಯ ಪರಿಚಯವಿಲ್ಲದೆ ಕಳೆದು ಹೋದವರೇ ಹೆಚ್ಚು.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆಂಬಂತೆ
ತನ್ನಲ್ಲದಕ್ಕೆ ಹವಣಿಸುವದು ಬಿಟ್ಟು ಬೆನ್ನಟ್ಟು ಅನ್ನದ ದಾರಿಯ,
ನೋಡು ನೀ ಹೆತ್ತವರ ಮೋರೆಯ
✍🏻ವಿನುವೇದ
Comments