ಭಾವನೆಗಳು
- VinuVeda
- Sep 7, 2017
- 1 min read
Updated: Dec 19, 2021
ಅಜ್ಞಾನ:
ಬೈಗೀಗ ರಜೆ,
ಮುನಿಸು,
ರಾಜಿಯಾಗದಂತೆ ಬೈದು ಕಳುಹಿಸಿದೆ
ಬೈಗನು
ಬೆಳಗು ಕಂತುವವರೆಗೂ ಬಾರದು ಬೈಗು,
ಅಜ್ಞಾನವೆಂಬ ತವರಿಂದ...
ಕಣ್ಣಹನಿ:
ಹನಿಗಳೆಲ್ಲ ಸೇರಿ ಕಣ್ಣ ಕೊನೆಗೆ ಬಂದು
ನೋವಿಗೆ ಬಹಿಷ್ಕಾರ ಹಾಕಿದ್ದಾವೆ
ನೋವಿಗೆಷ್ಟು ಧೈರ್ಯ ನಲಿವ ತುಳಿಯಲು?
ಕವನಗಳ ಬರ
ಕವಿತಗಳು ಹುಟ್ಟುತ್ತಿಲ್ಲ
ಕವನಗಳ ಸುಳಿವಿಲ್ಲ
ಬರುವ ಆಪತ್ತು ನೆನೆ ನೆನೆದು
ಬರಡಾಯ್ತು ಸಮಯವೆಲ್ಲ

ಪ್ರೀತಿಯಮಳೆ
ಹನಿಗುಟ್ಟುವ ಮಳೆ
ಜೀರಿಡುವ ಜಿಲಿಜಿಂಬೆ
ಎದೆಯ ತುಂಬ ಪ್ರೀತಿಯ ಸೆಲೆ
ಕಣ್ಣತುಂಬ ಕನಸ ಬುಟ್ಟಿ
ಮೈಮರೆತಿರಲು
ಧುತ್ತೆಂದು ಬಂದ ಸುಂದರಾಂಗ
ಪ್ರೀತಿ ಹುಟ್ಟಲು ಇನ್ನೇನುಬೇಕು
✍🏻ವಿನುವೇದ
コメント