ಸೈದ್ಧಾಂತಿಕತೆ ಮತ್ತು ಮಾನವೀಯತೆ
- VinuVeda
- Sep 10, 2017
- 2 min read
Updated: Aug 21, 2021
ಇತ್ತೀಚೆಗೆ ನಡೆದ ಗೌರಿ ಲಂಕೇಶರ ಹತ್ಯೆ ಬಗ್ಗೆ ತಿಳಿದಾಗ ಸಿದ್ದಾಂತಗಳ ವೈಪರೀತ್ಯಗಳು ಯಾವ ಅಂತ್ಯ ಕಾಣುವುದು ಎಂಬುವುದೊಂದು ಸಣ್ಣ ಯೋಚನೆ ಹುಟ್ಟಿತು.
ನನ್ನ ಬಾಲ್ಯದ ಒಂದು ಸಣ್ಣ ಘಟನೆಯನ್ನು ಉದಾಹರಿಸುತ್ತಿದ್ದೇನೆ. ಒಂದು ಸಾಧಾರಣ ಬ್ರಾಹ್ಮಣ ಕುಟುಂಬದಲ್ಲಿ ಬೆಳೆದ ಹೆಣ್ಣು ಮಗವೊಂದನ್ನು ಅದರ ತಂದೆ ತಾಯಿ ಯಾವುದೇ ಜಾತಿ ಭೇದವಿಲ್ಲದೆ ದಲಿತ ಹೆಂಗಸೊಬ್ಬಳಿಗೆ ಆಡಿಸಲು ಬಿಡುತ್ತಾರೆ. ಆಕೆಯೋ ಮಗುವನ್ನು ದೇವತೆಯಂತೆ ಬೆಳೆಸುತ್ತಾಳೆ. ಮನೆಯವರ ಗೌರವಕ್ಕೆ ಪಾತ್ರಳಾಗಿ ಗಿರಿಜಾಳಿಂದ ಮನೆಯವರ ಪ್ರೀತಿಯ ಗಿರ್ಜಕ್ಕಳಾಗುತ್ತಾಳೆ.
ಅದೇ ಮಗು ಬೆಳೆದು ಹೊರ ಪ್ರಪಂಚಕ್ಕೆ ಪರಿಚಿತಳಾದಾಗ ಅದೇ ಗಿರಿಜಳ ಸಮಾಜದ ಮಹಾನುಭಾವರೊಬ್ಬರ ಅತಿರೇಕದ ಕುಡಿತಕ್ಕೆ ಆ ಮಗುವಿನ ತಾಯಿ ಮಾನಸಿಕವಾಗಿ ನೊಂದು ಅಂದ ಮಾತುಗಳಿಗೆ ಅದು ಬ್ರಾಹ್ಮಣರಿಂದಾದ ದೌರ್ಜನ್ಯ ವಾಗಿ ವಿಷಯ ವಿಪರೀತಕ್ಕೇರುತ್ತದೆ. ಇಲ್ಲಿನ ಸಮಾಜ ಆ ಮನೆಯ, ಕುಟುಂಬದ ಗೌರವಕ್ಕೆ ಧಕ್ಕೆ ಬರುತ್ತದೆ.
ಇದೆಲ್ಲ ನೋಡಿದಾಗ ನನ್ನಲ್ಲಿ ಮೂಡಿದ ಒಂದೇ ಒಂದು ಪ್ರಶ್ನೆಯೆಂದರೆ ಅಚಾರಗಳು ಹದಮೀರಿದಾಗ ವಿಚಾರಗಳು ತಪ್ಪಾದಾಗ ಅಥವಾ ಆ ವಿಚಾರಗಳನ್ನು ಮಂಡಿಸುವ ರೀತಿಗಳು ತಪ್ಪಾದಾಗ ಅದರ ಬಗ್ಗೆ ತಿಳಿಸಿ ಹೇಳುವುದಾಗಲಿ ತಿದ್ದುವುದಾಗಲಿ ಮಾಡುವುದು ಅಪರಾಧವೇ?
"ಕನ್ಹಯ್ಯನ ಧೋರಣೆಗಳೇನೆ ಇರಬಹುದು, ಗೌರಿಯ ಸಿದ್ದಾಂತಗಳೇನೆ ಇರಬಹುದು ಅವರ ಆಲೋಚನೆಗಳನ್ನ ವಿರೋಧಿಸಿ ಅವರ ಬದುಕುವ ಹಕ್ಕಗಳನ್ನಲ್ಲ" ಎಂದು ಬಾಯಿಬಡಿದುಕೊಳ್ಳುತ್ತಿರುವ ಪ್ರತಿಯೊಬ್ಬ ವಿಚಾರವಾದಿಯೆನಿಸಿಕೊಂಡವನಲ್ಲೂ ನನ್ನದೊಂದು ಪ್ರಶ್ನೆ, ಈಗಾಗಲೇ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಕೊಲೆಯಾಗಿಹೋದ ಎಷ್ಟು ಜನರಿಗಾಗಿ ನೀವು ಕಣ್ಣೀರಿಟ್ಟಿರಿ? ಭಯೋತ್ಪಾದಕರನ್ನು ಏನು ಮಾಡುವಿರಿ? ಅತ್ಯಾಚರಿಗಳನ್ನೇಕೆ ಬೆಂಬಲಿಸುವಿರಿ? (ಹಾಗೆಂದು ಆಕೆಯ ಕೊಲೆ ಸಮರ್ಪಕವೆಂದು ನಾನು ಸಾಧಿಸುತ್ತಿಲ್ಲ ಖಡಾಖಂಡಿತವಾಗಿಯೂ ನಾನು ವಿರೋಧಿಸುತ್ತೇನೆ) ಇಲ್ಲಿ ನನ್ನನ್ನು ಕಾಡುತ್ತಿರುವ ಕೆಲವು ಪ್ರಶ್ನೆಗಳೆಂದರೆ, ಯಾವ ಧರ್ಮವು ಅನ್ಯಾಯದಿಂದ ದೂರವಿದೆಯೋ, ಯಾವ ಧರ್ಮದಲ್ಲಿ ತಾನು ಸ್ವತಂತ್ರವಾಗಿ ಇರಬಲ್ಲೆನೋ, ಯಾವ ಧರ್ಮಮೂಲದಿಂದ ಬಂದ ತಂದೆಯಿಂದ ತನಗೆ ಒಳ್ಳೆಯ ಶಿಕ್ಷಣ ದೊರೆಯಿತೋ ಅಂತಹಾ ಧರ್ಮವನ್ನು ಹೀನಾಯವೆಂದು ಹೀಯಾಳಿಸಿದ್ದು ಸರಿಯೇ? ಹಾಗೊಂದುವೇಳೆ ಮಾನವ ನಿರ್ಮಿತ ಧರ್ಮಗಳೇ ಸರಿ ಎಂದಾದಲ್ಲಿ ಆಕೆ ಏಕೆ ಹೊಸದೊಂದು ಧರ್ಮವನ್ನು ಹುಟ್ಟುಹಾಕಿಲ್ಲ? ಇಲ್ಲ ಮಾನವ ನಿರ್ದೇಶಿತ ಧರ್ಮಗಳ ಆಶ್ರಯ ಪಡೆಯಲಿಲ್ಲ? ಇಲ್ಲಿದ್ದುಕೊಂಡು ಆಕೆಯ ವಿಚಾರಗಳು ಎಷ್ಟು ಜನರಿಂದ ಮಾನ್ಯವಾಯಿತು? ಒಂದು ಒಳ್ಳೆಯ ವಿಚಾರಗಳನ್ನು ವಿರೋಧಿಸಲು ಹಲವು ಕೆಟ್ಟ ವಿಚಾರಮಂಡನೆ ಎಷ್ಟು ಸರಿ?
ಇತ್ತೀಚೆಗೆ ಕನ್ಹಯ್ಯ ಹಾಗು ಉಮರ ಖಾಲಿದನ ಟ್ವೀಟ್ಗಳನ್ನ ಗಮನಿಸಿದೆ, ತಮ್ಮನ್ನು ಮಕ್ಕಳೆಂದ ಗೌರಿ ಲಂಕೇಶನ್ನು, ಕನ್ಹಯ್ಯ "ತಾಯಿಸಮಾನ" ಎಂದರೆ ಉಮರ ಖಾಲಿದ "ಗೌರಿ' ನಿನ್ನನಂತರವೂ ನಿನ್ನ ವಿಚಾರಗಳು ಅಮರವಾಗಿರಲಿ ಎಂದು ಹರಸುತ್ತಾನೆ."

ಇಲ್ಲಿ ವಿಚಾರಧಾರೆಗಳಿಗಿಂತ ಹೆಚ್ಚಾಗಿ ಅಜ್ಞಾನಿಗಳ ಯೋಚನೆಯ ಮಟ್ಟ ನೆನೆದು ನಗು ಬರುತ್ತದೆ. ಇನ್ನು ಕನ್ಹಯ್ಯನ ವಿಚಾರಕ್ಕೆ ಬರೋಣ ಈತನ ಯಾವ ಧೋರಣೆಗಳೂ ಸ್ಪಷ್ಟವಾಗಿಲ್ಲ ಬರಿಯ ಮೋದಿ ವಿರೋಧಿ ಮಾತುಗಳು, ಹಾಗು ತಾನೊಬ್ಬ ಮಹಾ ದಲಿತಪರ ಸಂಘಟಕ ಎಂಬ ತೋರುವಿಕೆಯಷ್ಟೆ. ಆತನಲ್ಲಿ ಸಮಸ್ಯೆಗೆ ಪರಿಹಾರಗಳಿಲ್ಲ, (ಸಮಸ್ಯೆ ಗಳಿರುವುದೆ ಆತನವಿಚಾರಧಾರೆಯಲ್ಲಿ)

ಬಹುತೇಕ ಮಕ್ಕಳಿಗೆ ಹೆತ್ತವರು ನೀಡುವ ಶಿಕ್ಣಣವೇ ಬುನಾದಿ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಹಾಗು ಅವರು ವಿಮರ್ಶಾತ್ಮಕ ದ್ಋಷ್ಟಿಯಿಂದ ಬಾಳುವಂತೆ ರೂಪಿಸಬೇಕು.ಇನ್ನೊಬ್ಬರನ್ನು ಹೀಯಾಳಿಸುವುದರಿಂದಲೇ ನಮ್ಮ ಬೇಳೆ ಬೇಯಿಸವಂತಾಗಬಾರದು. ಜೆ.ಎನ್.ಯು ದ ಪಠ್ಯಕ್ರಮಗಳೇನು ಅಲ್ಲಿ ಏಕೆ ಇತಿಹಾಸವನ್ನು ತಿರುಚಾಲಾಗುತ್ತಿದೆ ಎಂದು ಯಾರಾದರೂ ಯೋಚಿಸಿದ್ದಾರೆಯೇ? ನಮ್ಮಲ್ಲಿ ಕೆಲವು ಭಾಷಾಂಧರು ತಮ್ಮ ತಮ್ಮ ರಾಜ್ಯಗಳನ್ನು ಪ್ರತ್ಯೇಕ ರಾಷ್ಟ್ರ ಮಾಡುವ ಆಲೋಚನೆ ಮಾಡುತ್ತಿದ್ದಾರೆ. ಎಷ್ಟೋ ವಿರೋಧಿ ರಾಷ್ಟ್ರಗಳು ಭಾರತ ನುಚ್ಚು ನೂರಗಲಿ ಎಂದೇ ಬಯಸುತ್ತಿವೆ. ನಮ್ಮ ನಮ್ಮಲ್ಲಿ ಭಾಷಾ ಜಗಳ ಬಂದಾಗ ಅದನ್ನು ಜಾಣ್ಮೆಯಿಂದೇಕೆ ಬಗೆಹರಿಸುವ ಪ್ರಯತ್ನಗಳು ನಡೆಯುತ್ತಿಲ್ಲ? ಉದಾಹರಣೆಗೆ ಕನ್ನಡನಾಡನ್ನೇ ಪ್ರತ್ಯೇಕ ರಾಷ್ಟ್ರ ಮಾಡಬೇಕು ಎಂದಾಗ ತುಳುವರ, ಕೊಂಕಣರ ಅಸ್ತಿತ್ವ ದ ಪ್ರಶ್ನೆಗೆ ನಮ್ಮಲೊಬ್ಬರು "ಅವರು ಬೇಕಾದರೆ ಪ್ರತ್ಯೇಕವಾಗಲಿ ಎಂದರು", ಇತ್ತೀಚೆಗೆ ಅವರ ಧೋರಣೆ ಬದಲಾಗಿ ತುಳುವನ್ನು ಎಂಟನೆಯ ಪರಿಚ್ಛೇದಕ್ಕೆ ಸೇರಿಸಿ ಎಂದರು ಈ ರೀತಿಯಾಗಿ ಕ್ಷಣಕ್ಕೊಮ್ಮೆ ಧೋರಣೆಗಳು ಹೇಗೆ ಬದಲಾಗುವವು? ಗೌರಿ ಲಂಕೇಶರ ಭಾಷಣಗಳಲ್ಲಿ ಚಪ್ಪಾಳೆ ಹೆಸರುಗಳಿಸಬೇಕೆಂಬ ಹಂಬಲವಿದೆಯೇ ಹೊರತು ತಾತ್ವಿಕವಾದಗಳಿಲ್ಲ. ಆಕೆಯ ಮಾತಿನಂತೆ ಒಂದುವೇಳೆ ಮಾನವ ಸ್ಥಾಪಿತ ಧರ್ಮವೇ ಶ್ರೇಷ್ಠ ವಾದಲ್ಲಿ ಆಕೆ ಅವುಗಳನ್ನೇ ಅನುಸರಿಸುತ್ತಿದ್ದಳು, ಕಾಸರಗೋಡಿನ ಲೇಖಕಿ ಕಮಲಾ ಸುರಯ್ಯರವರಂತೆ.
ಈ ಕಂಡೋರ ಮಕ್ಕಳ ಬಾವಿಗಿಳಿಸಿ ಆಳನೋಡುವ ಧೋರಣೆ ಏಕೆ? ಮೊದಮೊದಲು ಹೆಸರಿಗಾಗಿ ಒಂದು ವಿಚಾರವನ್ನು ವಿರೋಧಿಸಿ ತದನಂತರಲ್ಲಿ ಮಾತುಗಳನ್ನು ತಿರುಚಿ ತಮ್ಮದೇ ಸಿದ್ಧಾಂತದ ವಿರುಧ್ಧವಾಗಿ ನಡೆದುಕೊಳ್ಳುವವರನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವದು ಈಗಿನಂತೆ ಹಾಡುಹಗಲ ಕೊಲೆಗಳನ್ನು ನೋಡುವುದು ಯಾವ ದುರಂತ ನೀವೇ ಹೇಳಿ. ಕೆಲವು ಹಿಂದೂ ಯುವಕರ ಸರಣಿಕೊಲೆಗಳನ್ನು ಪ್ರಶ್ನಿಸಿ ಮಾಡಿದ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಅಗಮಿಸಿದ ಕೆಲ ನಾಯಕರಿಗೆ ಕೊಲೆ ಬೆದರಿಕೆಯೊಡ್ಡಿದಾಗ ಇದೇ ಈ ವಿರೋಧಿಸುತ್ತಿರುವ ಧ್ವನಿಗಳು ಎಲ್ಲಡಿಗಿದವು? ಜೀವಕ್ಕೆ ಜಾತಿಯಾಧಾರದಲ್ಲಿ, ಆರ್ಥಿಕ ಆಧಾರದಲ್ಲಿ ಬೆಲೆ ಕಟ್ಟಲಾಗುತ್ತಿದೆಯೇ?!
ಇದು ನಮ್ಮ ದೇಶವೇ?
Comments