
ಬಾಗಿಲ ಹೊರಗಿನ ವೀಣೆ
- VinuVeda
- Jan 21, 2022
- 1 min read
Updated: Jan 30, 2022
ಹೇಳದ ರಾಗವೊಂದು ಕದದೀಚೆ ಕಾದಿರಲು,
ಕೇಳಿಸದ ಮೌನವೊಂದು ಕದದಾಚೆ ಅಡಿಗಿದೆ, ದಾರಿಹೋಕ ಭಾವನೆಗಳು ತಾನಿಲ್ಲಿರಬಹುದೇ
ಎಂಬ ಕನಸ ಕಾಣುತ್ತ ಹಾದು ಹೋಗುತ್ತಿವೆ...
ಕದವ ತಟ್ಟಲೇ ಬೇಕು ವೀಣಾವಾದನ
ನುಡಿಸುವವರಿಗೆ ಪ್ರಿಯ ಬರಿಯ ಮೌನ
ಸ್ವರಗಳು ಹಾಯಾಗಿ ತೇಲುತಿರಲು
ನುಡಿಸುವ ಬೆರಳೇಕೋ ದೂರ ಸರಿದಿವೆ ತಂತಿಯಿಂದ
ಮಾತಿರದ ಮೌನವೊಂದು ಮೂಕವಾಗಲು
ಮೌನದ ಸಂಭಾಷಣೆಗೂ ಬೇಸರವಾಗಿದೆ
ಆಕರ್ಷಣೆಯ ಸಂತೆಯಲಿ ರಾಗದ್ವೇಷಗಳ ಜಾತ್ರೆಯಲಿ
ತಬ್ಬಲಿಯಾಗಿದೆ ನವಿರಾದ ನಿಷ್ಕಲ್ಮಶ ಪ್ರೇಮ...
✍🏻ವಿನುವೇದ
ಅಮ್ಮನ ಕಾಲಂದುಗೆ
ಅಮ್ಮ ನಿನ್ನ ಕಾಲಂದುಗೆ ಹಂದಲದೆ ಸೂರ್ಯೋದಯ ಕೇಳು|
ನಿದ್ರಿಸಿದಾಗ ಕಾಳಜಿಯಿಂದ ನೀ ಹಣಕಿ ನೋಡಿ ಹೋಗುವಾಗ ಜೋಗುಳ|
ಗದರಿಸಲು ಧಾವಿಸಿದಾಗ ಅಪಾಯದ ಘಂಟೆ|
ಸಿಟ್ಟಿಂದ ಹೆಜ್ಜೆಯಪ್ಪಳಿಸಿ ಬಂದೆಯೋ ರಣಕಹಳೆ|
ತೊಟ್ಟ ಕೈಬಳೆಯ ಠಣಠಣದೊಂದಿಗೆ ಕಾಲಂದುಗೆಯ ಕಿಂಕಿಣಿಯದು
ಮನೆತುಂಬ ಮಮತೆಯ ಮಾರ್ದನಿ ಕೇಳು|

✍🏻ವಿನುವೇದ
Picture Credit : 1. @spadjay - Twitter a/c
2. vinuveda
Comments