
ಏಸುಕ್ರಿಸ್ತನ ಮತಾಂತರ
- VinuVeda
- Jun 21, 2021
- 1 min read
Updated: Aug 21, 2021
ಭಾರತದಲ್ಲಿನ ಜನರನ್ನ ಸುಲಭದಲ್ಲಿ ಬದಲಾಯಿಸೋದು ಕಷ್ಟಸಾಧ್ಯ ಎಂದರಿತ ಪಾಶ್ಚಾತ್ಯ ಮಿಷನರಿಗಳು ಸನಾತನ ಎಂಬ ಪದ ಕೇಳಿದರೆ ಸಾಕು ನಮ್ಮಲ್ಲೂ ಅದಿದೆ ಅನಾದಿಕಾಲದಿಂದ ಎಂದು ತೋರಿಸಿಕೊಳ್ಳಲು ದಿನಕ್ಕೊಂದು ಕಥೆ ಕಟ್ಟುತ್ತ ಅವರ ದೇವರಿಗೇ ಹೊಸ ವೇಷ ಭೂಷಣ ತೊಡಿಸುವ ರೂಢಿ ಶುರು ಮಾಡಿಕೊಂಡಿದ್ದಾರೆ.
ಅವರು ಆರಾಧನೆ ಮಾಡುವ ದೇವರ ಮೇಲೇ ಅವರಿಗೆ ಅನುಮಾನ ಮೂಡಿದ್ದು ಯಾಕೋ! ಆದರೆ ದೇವರನ್ನೆ ಮತಾಂತರ ಮಾಡುವ ನಿರ್ಧಾರ ಮಾಡಿದ್ದು ವಿಶೇಷವೇ!!!
ದಾರಿ ಸರಿ ಇದ್ದಲ್ಲಿ ದೊಂಬರಾಟವೇಕೆ!
ಬಾಲ್ಯದಿಂದ ಕ್ರಿಶ್ಚಿಯನ್ ಸಮುದಾಯದ ಪರಿಚಯವಿದ್ದ ನನಗೆ ಈ ಹೊಸ ಹುಚ್ಚಾಟಗಳು ವಿಪರೀತವೆನಿಸಿದ್ದು ಸುಳ್ಳಲ್ಲ. ನನಗೆ ಪರಿಚಯವಿದ್ದ ದಕ್ಷಿಣ ಕನ್ನಡದ ಹಲವು ಕ್ರಿಶ್ಚಿಯನ್ ಸಮುದಾಯದವರ ಮಾತು ಒಂದೆ "ಹೌದು ನಾವು ಮೂಲತಃ ಹಿಂದೂಗಳೆ ಮತ್ತು ನಾವು ಮಾತಾಂತರಗೊಂಡಿದ್ದೇವೆ ಹಾಗು ನಾವು ಖುಷಿಯಾಗಿದ್ದೇವೆ ಕೆಲ ಆಚರಣೆಗಳು ಉದಾಹರಣೆಗೆ ಕೊರಳ ಹಬ್ಬ ನಮ್ಮ ಸಂಪ್ರದಾಯವಾಗಿ ಮುಂದುವರೆಸಿದ್ದೇವೆ ಹಾಗೂ ಹಿಂದೂ ಧರ್ಮವನ್ನು ಗೌರವಿಸುತ್ತೇವೆ" ಎಂದು.
ಆದರೆ ಈ ತಮಿಳು ಹಾಗು ಉತ್ತರದ ಇತರ ರಾಜ್ಯದಲ್ಲಿ ಈ ಪಾಶ್ಚಾತ್ಯರ ಹಾವಳಿ ಬಹಳ ಹಾಸ್ಯಾಸ್ಪದವಾಗಿದೆ. ಇತ್ತೀಚೆಗೆ ಹಲವು ತಿಂಗಳ ಹಿಂದೆ ನನಗೆ ಸಾಮಾಜಿಕ ಜಾಲತಾಣದಲ್ಲಿ ದೊರೆತ ಕೆಲ ಚಿತ್ರಗಳೇ ಇದಕ್ಕೆ ಸಾಕ್ಷಿ, ಸುಬ್ರಹ್ಮಣ್ಯನ ಅವತಾರಿ ಏಸು, ಏಸು ಭಗವದ್ಗೀತೆ, ಚರ್ಚ್ಗ/ ಇಗರ್ಜಿ ಮುಂದೆ ಧ್ವಜ ಸ್ತಂಭ, ಕೊರಳ ಹಬ್ಬ, ಜನಪದ ಕ್ರಿಸ್ತ ಭಜನೆಗಳು ಜಾತ್ರೆಗಳು, ರಥೋತ್ಸವಗಳು ಇನ್ನು ಹತ್ತು ಹಲವು.
ಹಿಂದೂ ಧರ್ಮದ ಆಚರಣೆ ಹಾಗು ನಂಬಿಕೆಗಳ ಬಗ್ಗೆ ವಿವರಿಸಿದರೆ ಮೂಡನಂಬಿಕೆ ಸೈತಾನನ ಪ್ರತಿರೂಪ ಎನ್ನುವ ಇವರು ತಮ್ಮದೆಲ್ಲ ಆಚರಣೆಗಳು ಅತ್ಯುತ್ತಮ ಹಾಗು ಸರ್ವಶ್ರೇಷ್ಠ ಎಂದು ಬೀಗುವುದೇನೋ ಹೌದು ಆದರೆ ಪ್ರತಿಪಾದಿಸಲು ಸೋಲುತ್ತಾರೆ.
ಅಸಹ್ಯದ ಪರಮಾವಧಿ ಮುಟ್ಟಿದ ಇವರ ದೊಂಬರಾಟಗಳನ್ನು ನೋಡಿದರೆ ಏಸು ಪರಮಾತ್ಮ ಖಂಡಿತ ಯಾರ ಒತ್ತಾಯವೂ ಇಲ್ಲದೆ ತಾನೆ ಮೊಳೆ ಹೊಡೆದುಕೊಂಡು ಶಿಲುಬೆಗೇರುವುದು ಶತಃಸಿದ್ದ !!
ಹಿಂದುಗಳು ತಮ್ಮ ಧರ್ಮಾಚರಣೆ ಪಾಲನೆ ಮಾಡೋದು ಬ್ರಾಹ್ಮಣ್ಯತ್ವ' ಅನ್ನೋ ನಕಲಿ ಜಾತ್ಯತೀತರು ಬೇರೇ ಧರ್ಮಗಳಲ್ಲಿ ಪಾಲನೆ ಮಾಡೋ ಮೂಢ ಆಚರಣೆಗಳ ಬಗ್ಗೆ ಕಣ್ಣಿದ್ದೂ ಕುರುಡರು,ಬಾಯಿ ಇದ್ದೂ ಮೂಗರಾಗಿರುವುದು ಕರುಣಾಜನಕ
ಅತಿ ವಿಚಿತ್ರವೆಂದರೆ ಹಿಂದೂ ಧರ್ಮ ಮೌಢ್ಯತೆಯಿಂದ ತುಂಬಿದೆ ರಾಮಾಯಣ ಹಾಗು ಮಹಾಭಾರತಗಳೆಲ್ಲ ಕಾಲ್ಪನಿಕವೆಂದ ಪಾಶ್ಚಾತ್ಯರು ಮಹಾಭಾರತಕ್ಕೆ ಮೊರೆಹೋದದ್ದು ಅಷ್ಟೆ ಸತ್ಯ ಯಾಕೆಂದರೆ ಈ ಚಿತ್ರ ನೋಡಿ ದೇವರಾದ ಕ್ರಿಸ್ತನ ಪ್ರತಿಮೆ ಮಹಾಭಾರತದಲ್ಲಿ ಭಗವದ್ಗೀತೆ ಭೋದಿಸುವ ಕೃಷ್ಣನಂತೆ ಮೂಡಿದ್ದು. ಪ್ರಶ್ನಿಸುವ ಪ್ರಯತ್ನ ,ಮನಃಸ್ಥಿತಿ ಎರಡೂ ಕಳೆದುಕೊಂಡೆವೆ ನಾವು?

ಸರಿ ಒಂದು ಮಾತು ಹೀಗೂ ಒಪ್ಪೋಣ ಎಲ್ಲ ದೇವರೂ ಒಂದೆ ಅವತಾರ ಹಾಗು ನಾಮ ಹಲವಿರಬಹುದು, ಹಾಗಾದರೆ ಕ್ರೈಸ್ತ ಧರ್ಮ ಬೇರೆ ಎಂದು ಏಕೆನ್ನಬೇಕು?
ಅದು ಹಿಂದು ಧರ್ಮದ ಒಂದು ಜಾತಿ ಅಥವ ಪಂಗಡ ಎಂಬ ಪಟ್ಟಿಗೇಕೆ ಸೇರಿಸಬಾರದು?
ಹಿಂದೂ ದೇವರ ರೂಪದಲ್ಲಿ ಏಸುವನ್ನು ಕಾಣುವ ಹಂಬಲವೇನೋ ಒಪ್ಪಿದೆ ಆದರಿದು ಮುಗ್ಧ ಏಸು ಪರಮಾತ್ಮನನ್ನೆ ಮತಾಂತರ ಮಾಡಿದಂತಾಗಲಿಲ್ಲವೆ?
Comments